ಡಿ.ಎನ್.ಅಕ್ಕಿ ಅವರಿಗೆ “ಸಿದ್ಧಾಂತಕೀರ್ತಿ” ಪ್ರಶಸ್ತಿ

ಹೊಂಬುಜ (ಹೊಸನಗರ), ಫೆಬ್ರವರಿ 17, 2017: ಶ್ರೀ ಕ್ಷೇತ್ರ ಹೊಂಬುಜ ಜೈನ ಮಠದ ವತಿಯಿಂದ ನೀಡುವ 2017ನೇ ಸಾಲಿನ ಸಿದ್ಧಾಂತ ಕೀರ್ತಿ ಪ್ರಶಸ್ತಿಯನ್ನು ಹೈದ್ರಾಬಾದ್ ಕರ್ನಾಟಕದಲ್ಲಿ ವಿಶೇಷವಾಗಿ ಸಂಶೋಧನೆ, ಪುರಾತತ್ವ, ಅನ್ವೇಷಣೆ, ಸಾಹಿತ್ಯದ ಮೂಲಕ ವಿಶೇಷ ಕೊಡುಗೆಯನ್ನು ನೀಡಿರುವ ಹಿರಿಯ ವಿದ್ವಾಂಸರಾದ  ಡಿ.ಎನ್. (ದೇವೇಂದ್ರಪ್ಪ ನಾಭಿರಾಜ) ಅಕ್ಕಿ ಅವರಿಗೆ ನೀಡಲಾಗುವುದು ಎಂದು ಮಠದ ಪೀಠಾಧಿಕಾರಿ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.

ಪ್ರಶಸ್ತಿಯನ್ನು  ಶ್ರೀಕ್ಷೇತ್ರದ ವಾರ್ಷಿಕ ಮಹಾರಥಯಾತ್ರಾ ಮಹೋತ್ಸವದ ಮುನ್ನಾದಿನವಾದ 19-03-2017ರ ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ನೀಡಲಾಗುವುದು. ಪ್ರಶಸ್ತಿಯು ₹ 35 ಸಾವಿರ ನಗದು ಒಳಗೊಂಡಿದೆ. ಇದುವರೆಗೆ ಈ ಪ್ರಶಸ್ತಿಯನ್ನು ಸುಮಾರು ನಾಲ್ಕು ದಶಕಗಳಿಂದ ಶ್ರೀಮಠದಿಂದ ನೀಡಲಾಗುತ್ತಿದೆ. – ಹೊಂಬುಜ ಜೈನ ಮಠ