ಶ್ರೀ ಹೊಂಬುಜ ಕ್ಷೇತ್ರದಲ್ಲಿ ವಾರ್ಷಿಕ ರಥಯಾತ್ರಾ ಮಹೋತ್ಸವ 17-22 ಮಾರ್ಚ್ 2017ರ ವರೆಗೆ

ಧರ್ಮಬಂಧುಗಳೇ,

ಶ್ರೀ  ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಪರಂಪರಾನುಗತವಾಗಿ ನಡೆದು ಬಂದಿರುವ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವವು ಮಾರ್ಚ್ 17 ರಿಂದ ಮಾ. 22 ರವರೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಲಿವೆ. ಶ್ರೀ ದುರ್ಮುಖಿನಾಮ ಸಂವತ್ಸರದ ಫಾಲ್ಗುಣ ಮಾಸ  ಪಂಚಮಿಯಿಂದ ನವಮಿಯವರೆಗೆ ನೆರವೇರಲಿದೆ.

ಕಾರ್ಯಕ್ರಮ ಪಟ್ಟಿ

  • ಮಾರ್ಚ್ 14 ರಿಂದ ಮಾ. 16 ರವರೆಗೆ ಕ್ಷೇತ್ರದ ಬಸದಿಗಳಲ್ಲಿ ವಿಶೇಷ ಆರಾಧನೆಗಳು.
  • ಮಾರ್ಚ್ 17 – ಧ್ವಜಾರೋಹಣ ಹಾಗೂ ನಾಗವಾಹನೋತ್ಸವ.
  • ಮಾರ್ಚ್ 18 – ಸಿಂಹವಾಹನೋತ್ಸವ.
  • ಮಾರ್ಚ್ 19 – ಬೆಳ್ಳಿರಥೋತ್ಸವ ಹಾಗೂ ಪುಷ್ಪರಥೋತ್ಸವ.
  • ಮಾರ್ಚ್ 20 – ಮೂಲಾನಕ್ಷತ್ರದಂದು ಮಹಾರಥೋತ್ಸವ.
  • ಮಾರ್ಚ್ 21 – ಗುಡ್ಡದ ಬಸದಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ 108 ಕಲಶಗಳ ಮಹಾಭಿಷೇಕ ಮತ್ತು ಸಂಘ ಪೂಜೆ.
  • ಮಾರ್ಚ್ 22 – ಕುಂಕುಮೋತ್ಸವ ಹಾಗೂ ಧ್ವಜ ಅವರೋಹಣ.

ಧಾರ್ಮಿಕ ಸಭೆ – ಮಾರ್ಚ್ 19 ರಂದು ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾ ಸ್ವಾಮಿಗಳವರು ವಹಿಸಲಿದ್ದಾರೆ. ಧಾರ್ಮಿಕ ಸಭೆಯ ನಂತರ ಅಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 20 ರಂದು ಮಹಾರಥೋತ್ಸವದ ನಂತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾ ಸ್ವಾಮಿಗಳವರ ದಿವ್ಯ ಸಾನ್ನಿಧ್ಯ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ನಡೆಯುವ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಗೂ ವಾರ್ಷಿಕ ರಥಯಾತ್ರಾ ಮಹೋತ್ಸವದಲ್ಲಿ ಧರ್ಮಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗಬೇಕಾಗಿ ಅಪೇಕ್ಷೆ.

ಆಡಳಿತಾಧಿಕಾರಿ
ಶ್ರೀ ಕ್ಷೇತ್ರ ಹೊಂಬುಜ ಜೈನ ಮಠ, ಹುಂಚ

ಶ್ರೀ ಕ್ಷೇತ್ರ ಹೊಂಬುಜದಲ್ಲಿ ನಡುಯುವ ವಾರ್ಷಿಕ ರಥಯಾತ್ರಾ ಮಹೋತ್ಸವದ ಶ್ರೀಮುಖ ಪತ್ರಿಕೆ.
ಶ್ರೀ ಕ್ಷೇತ್ರ ಹೊಂಬುಜದಲ್ಲಿ ನಡುಯುವ ವಾರ್ಷಿಕ ರಥಯಾತ್ರಾ ಮಹೋತ್ಸವದ ಶ್ರೀಮುಖ ಪತ್ರಿಕೆ.