ಶ್ರೀಕ್ಷೇತ್ರ ಹೊಂಬುಜದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ವಾರ್ಷಿಕ ಸಮ್ಮೇಳನ

ಹೊಂಬುಜ, 5 ಅಕ್ಟೋಬರ್ 2019: ಶ್ರೀಕ್ಷೇತ್ರ ಹೊಂಬುಜದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ 33ನೇ ರಾಜ್ಯ ಸಮ್ಮೇಳನವು ಅಕ್ಟೋಬರ್ 18 ರಿಂದ 20ರ ವರೆಗೆ ನಡೆಯಲಿದೆ. ಹೊಂಬುಜ ಜೈನಮಠದ ಆಶ್ರಯದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯಾದ್ಯಂತದಿಂದ ಸುಮಾರು 300-350 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಪ್ರತಿನಿಧಿಗಳು ಕರ್ನಾಟಕದ ಇತಿಹಾಸ, ಸಂಸ್ಕೃತಿ ಹಾಗೂ ಶಾಸನಗಳಿಗೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಕಳೆದ ರಾಜ್ಯ ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನ ”ಇತಿಹಾಸ ದರ್ಶನ” ಸಂಪುಟ 34ರ ಬಿಡುಗಡೆ ಈ ಸಂದರ್ಭದಲ್ಲಿ ನಡೆಯಲಿದೆ.

ಸಮ್ಮೇಳನಾಧ್ಯಕ್ಷರಾಗಿ ಹಿರಿಯ ವಿದ್ವಾಂಸರಾದ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಆಯ್ಕೆಯಾಗಿದ್ದಾರೆ.

ರಾಜ್ಯ ಪ್ರಶಸ್ತಿಗಳು: ಅಲ್ಲದೆ ಇತಿಹಾಸ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ರಾಜ್ಯ ಪ್ರಶಸ್ತಿಗಳನ್ನು ಸಮ್ಮೇಳನದಲ್ಲಿ ಪ್ರಧಾನ ಮಾಡಲಾಗುವುದು.

  • ಇತಿಹಾಸ ಸಂಸ್ಕೃತಿ ಶ್ರ‍ೀ ಪ್ರಶಸ್ತಿ – ಡಾ.ವಸುಂಧರಾ ಫಿಲಿಯೋಜಾ
  • ಡಾ.ಬಾ.ರಾ.ಗೋಪಾಲ್ ಪ್ರಶಸ್ತಿ – ಡಾ.ಜೆ.ಎಂ.ನಾಗಯ್ಯ
  • ಸಂಶೋಧನ ಶ್ರ‍ೀ ಪ್ರಶಸ್ತಿ – ಡಾ.ಶೀಲಕಾಂತ ಪತ್ತಾರ
  • ನಾಯಕ ಶ್ರ‍ೀ ಪ್ರಶಸ್ತಿ – ಡಾ.ವಿರೂಪಾಕ್ಷಿ ಪೂಜಾರಹಳ್ಳಿ
  • ನೊಳಂಬ ಶ್ರ‍ೀ ಪ್ರಶಸ್ತಿ – ಡಾ.ಡಿ.ವಿ.ಪರಮಶಿವಮೂರ್ತಿ
  • ಸುಮಂಗಲ ಪಾಟೀಲ ಪ್ರಶಸ್ತಿ – ಡಾ.ಬಿ.ಜಿ.ಸಿದ್ಧಲಿಂಗಮ್ಮ
  • ಡಾ.ಶ್ರ‍ೀನಿವಾಸ ಹಾವನೂರ‍ ಪ್ರಶಸ್ತಿ – ಡಾ.ಕೆ.ವಸಂತಲಕ್ಷ್ಮಿ
  • ಸೂರ್ಯಕೀರ್ತಿ ಪ್ರಶಸ್ತಿ – ಶ್ರ‍ೀ ಎಂ.ಬಿ.ಪಾಟೀಲ
  • ಡಾ.ಎಂ.ಎಚ್.ಕೃಷ್ಣ ಮೆರಿಟ್ ಅವಾರ್ಡ್ – ಡಾ.ಮೋಹನ್ ಆರ್.

– ಶ್ರ‍ೀ ಕ್ಷೇತ್ರ ಹೊಂಬುಜ