ಶ್ರೀ ಕ್ಷೇತ್ರ ಹೊಂಬುಜದ ಹೊಸ ಮಹಾರಥದ ನಿರ್ಮಾಣಕ್ಕೆ ಚಾಲನೆ

ಹೊಂಬುಜ, 7 ಜೂನ್ 2019: ಶ್ರೀ ಕ್ಷೇತ್ರ ಹೊಂಬುಜದ ಹೊಸ ಮಹಾರಥದ ನಿರ್ಮಾಣಕ್ಕೆ ಹೊಂಬುಜ ಜೈನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಶೃತಪಂಚಮಿಯ ಶುಭದಿನದಂದು ಚಾಲನೆ ನೀಡಿದರು.

”ಕ್ರಿ.ಶ.602ರ ಮಾರ್ಚ್ ತಿಂಗಳ ಮೂಲಾನಕ್ಷತ್ರದ ಶುಭದಿನದಂದು ಸ್ಥಾಪನೆಯಾಗಿದ್ದು, ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ವಾರ್ಷಿಕ ಮಹಾರಥೋತ್ಸವವು ಪ್ರತಿವರ್ಷ ಕಳೆದ 1400 ವರ್ಷಗಳಿಂದ ಪರಂಪರೆಯಂತೆ ನಡೆದುಕೊಂಡು ಬರುತ್ತಿದೆ. ಪ್ರಸ್ತುತ ಬಳಕೆಯಲ್ಲಿರುವ ಮಹಾರಥವು ಸುಮಾರು 450 ವರ್ಷಗಳಷ್ಟು ಹಳೆಯದಾಗಿದ್ದು ಹೊಸ ರಥದ ನಿರ್ಮಾಣದ ನಂತರ ಅದನ್ನು ಮಹಾರಥೋತ್ಸವಕ್ಕೆ ಉಪಯೋಗಿಸಲಾಗುವುದು. ಮಹಾರಥದ ನಿರ್ಮಾಣಕಾರ್ಯವನ್ನು ಕಾರ್ಕಳದ ಸಮೀಪದ ಸಾಣೂರಿನ ಶಿಲ್ಪಿ ಪದ್ಮನಾಭ ಆಚಾರಿ ಹಾಗೂ ತಂಡದವರು ನಿರ್ವಹಿಸಲಿದ್ದಾರೆ ಎಂದು” ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರ ಸ್ವಾಮೀಜಿಯವರು ತಿಳಿಸಿದ್ದಾರೆ.

ಮಹಾರಥದ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಲಿಚ್ಛಿಸುವವರು ಶ್ರೀ ಮಠವನ್ನು ಸಂಪರ್ಕಿಸಲು ಕೋರಲಾಗಿದೆ.

– ಶ್ರೀ ಕ್ಷೇತ್ರ ಹೊಂಬುಜ