ಭಗವಾನ್ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ಲಕ್ಷದೀಪೋತ್ಸವ

ಹೊಂಬುಜ, 17 ನವೆಂಬರ್ 2019: ಭಗವಾನ್ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ಮಾವತಿ ಅಮ್ಮನವರ ಲಕ್ಷದೀಪೋತ್ಸವವು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಿತು. ಭಗವಾನ್ ಪಾರ್ಶನಾಥ ಸ್ವಾಮಿಯವರಿಗೆ ಸಂಜೆ ಪಂಚಾಮೃತ ಅಭಿಷೇಕವನ್ನು ಮಾಡಲಾಯಿತು.

ನಂತರ ಮಹಾಮಾತೆ ಪದ್ಮಾವತಿ ಅಮ್ಮನವರ ಅಡ್ಡಪಲ್ಲಕ್ಕಿ ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮುನಿ ಶ್ರೀ 108 ಪಾವನಕೀರ್ತಿ ಮಹಾರಾಜರು, ಆರ್ಯಿಕಾ ಶ್ರೀ 105 ಶಿವಮತಿ ಮಾತಾಜಿ, ಆರ್ಯಿಕಾ ಶ್ರೀ 105 ಸೌರಭಮತಿ ಮಾತಾಜಿಯವರು ಉಪಸ್ಥಿತರಿದ್ದರು. ಭಾರತದಾದ್ಯಂತ ದಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಪೂಜಾ ಕೈಂಕರ್ಯಗಳನ್ನು ಹಾಗೂ ಉತ್ಸವಗಳನ್ನು ನೋಡಿ ಪುನೀತರಾದರು.
– ಶ್ರೀ ಕ್ಷೇತ್ರ ಹೊಂಬುಜ