ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಸಾಂತ್ವನ ಹೇಳಿದ ಹೊಂಬುಜ ಜೈನ ಮಠದ ಶ್ರ‍ೀಗಳು

ಬೆಳಗಾವಿ, ಆಗಸ್ಟ್ 19, 2019: ಹೊಂಬುಜ ಜೈನಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರ‍ೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಇಂದು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದ್ದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಭೋಜ, ಸಿದ್ನಾಳ್, ಹುನ್ನರಗಿ ಗ್ರಾಮಗಳಿಗೆ ಭೇಟಿ ನೀಡಿದ ಸ್ವಾಮೀಜಿಯವರು ನೆರೆಹಾವಳಿಯಿಂದ ಹಾನಿಗೊಳಗಾದ ಜಾಗಗಳನ್ನು ಪರಿಶೀಲಿಸಿ ಅಲ್ಲಿನ ಜನತೆಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮಗಳ ಮುಖ್ಯಸ್ಥರು ಹಾಗೂ ಜೈನ ಸಮಾಜದ ಪ್ರಮುಖರು ಸ್ವಾಮೀಜಿಯವರಿಗೆ ಹಾನಿಯ ವಿವರಗಳನ್ನು ನೀಡಿದರು. ಅಲ್ಲಿನ ಜೈನ ಬಸದಿಯಲ್ಲಿ ಜನತೆಯೊಂದಿಗೆ ಸಭೆ ನಡೆಸಿದ ಸ್ವಾಮೀಜಿಯವರು ನೆರೆ ಹಾವಳಿಯಿಂದಾಗಿ ಉಂಟಾಗಿರುವ ಪರಿಣಾಮದ ಬಗ್ಗೆ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.
– ಶ್ರ‍ೀ ಕ್ಷೇತ್ರ ಹೊಂಬುಜ