ಶ್ರ‍ೀ ಕ್ಷೇತ್ರ ಹೊಂಬುಜಕ್ಕೆ ಶ್ರವಣಬೆಳಗೊಳದ ಸ್ವಸ್ತಿಶ್ರ‍ೀ ಚಾರುಕೀರ್ತಿಸ್ವಾಮೀಜಿಯವರ ಭೇಟಿ

ಹೊಂಬುಜ, 9 ಜುಲೈ 2019: ಶ್ರ‍ೀ ಕ್ಷೇತ್ರ ಹೊಂಬುಜಕ್ಕೆ ಶ್ರವಣಬೆಳಗೊಳದ ಸ್ವಸ್ತಿಶ್ರ‍ೀ ಚಾರುಕೀರ್ತಿಸ್ವಾಮೀಜಿಯವರ ಭೇಟಿ ನೀಡಿದರು. ಅವರಿಗೆ ಶ್ರ‍ೀ ಕ್ಷೇತ್ರ ಹೊಂಬುಜದ ಸ್ವಸ್ತಿಶ್ರ‍ೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪೂರ್ಣಕುಂಭ ಸ್ವಾಗತವನ್ನು ನೀಡಲಾಯಿತು.

ಶ್ರ‍ೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಭಗವಾನ್ ಶ್ರ‍ೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ವಾವತಿ ಅಮ್ಮನವರ ದರ್ಶನವನ್ನು ಮಾಡಿದರು. ಈ ಸಂದರ್ಭದಲ್ಲಿ ಅವರು ಶ್ರ‍ೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಪದ್ವಾವತಿ ಅಮ್ಮನವರಿಗೆ ಬೆಳ್ಳಿಯ ಕಲಶವನ್ನು ಸಮರ್ಪಿಸಿದರು. ನರಸಿಂಹರಾಜಪುರದ ಸ್ವಸ್ರಿಶ್ರ‍ೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
– ಶ್ರ‍ೀ ಕ್ಷೇತ್ರ ಹೊಂಬುಜ