ಕರ್ನಾಟಕದ ಪ್ರವಾಹ – ನೆರವಿನ ಸಹಾಯ ಹಸ್ತ ಚಾಚಿದ ಹೊಂಬುಜ ಜೈನ ಮಠ

ಕರ್ನಾಟಕದ ಪ್ರವಾಹ - ನೆರವಿನ ಸಹಾಯ ಹಸ್ತ ಚಾಚಿದ ಹೊಂಬುಜ ಜೈನ ಮಠ

ಹೋಂಬುಜ, 11 ಆಗಸ್ಟ್ 2019: ದಕ್ಷಿಣ ಭಾರತದಲ್ಲಿ ಶತಮಾನ ಕಂಡರಿಯದ ರೀತಿಯಲ್ಲಿ ಮಳೆಯಿಂದ ನದಿಗಳು ತುಂಬಿ ಹರಿದು ಪ್ರವಾಹದಿಂದ ಜನ ತತ್ತರಿಸಿ ತಮ್ಮ ಆಸ್ತಿ ಪಾಸ್ತಿ ಕಳೆದು ಕೊಂಡು ದುಃಖದಲ್ಲಿ ಮುಳುಗಿದ್ದಾರೆ. ಪ್ರವಾಹದಿಂದಾಗಿ ಕೃಷ್ಣ ನದಿ ತೀರದ ಜನರ ಸ್ಥಿತಿ ಶೋಚನೀಯವಾಗಿದೆ.

ಈಗಾಗಲೆ ಸರ್ಕಾರ, ಸಂಘ-ಸಂಸ್ಥೆಗಳು, ನಾಗರೀಕರು ಮುಕ್ತ ಹಸ್ತದಿಂದ ಸಹಕಾರ ನೀಡುತ್ತಾ ಅವರ ಕಣ್ಣೀರಿನ ಕ್ಷಣದಲ್ಲಿ ಧೈರ್ಯ ತುಂಬಿಸುವ ಕಾರ್ಯ ನಡೆದಿದೆ. ಈ ಕ್ಷಣದಲ್ಲಿ ಎಲ್ಲ ಮಠ ಮಾನ್ಯದಿಂದಲೂ ಹೆಚ್ಚಿನ ಸಹಯೋಗ ನಡೆದಿದೆ. ಅಂತೆಯೇ ಹೊಂಬುಜ ಶ್ರೀ ಹೊಂಬುಜ ಜೈನ ಮಠದಿಂದ ನಿರಾಶ್ರಿತರ ತಾತ್ಕಾಲಿಕ ಆಶ್ರಯಕ್ಕೆ ಸಹಯೋಗವಾಗಲೆಂದು 1000 ಶೀಟ್ (roof sheet) ಗಳನ್ನು ಮೊದಲ ಹಂತದಲ್ಲಿ ಹಾಗೂ ೨ನೇ ಹಂತದಲ್ಲಿ ಹಾಗೂ 2ನೇ ಹಂತದಲ್ಲಿ 50 ಗೋವುಗಳನ್ನು ಅವರ ನಿತ್ಯ ಜೀವನದ ಉಪಯೋಗಕ್ಕೆ ನೀಡುವ ಮೂಲಕ ಸಹಕರಿಸಲು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರು ನಿರ್ಣಯಿಸಿರುತ್ತಾರೆ.

ಸಮಾಜ ಬಾಂಧವರು ಹೆಚ್ಚಿನ ರೀತಿಯಲ್ಲಿ ಸಂತ್ರಸ್ತರಿಗೆ ಸಹಕರಿಸಲು ಮನವಿ ಮಾಡಿದ್ದು ಪ್ರವಾಹ ಪೀಡಿತ ಎಲ್ಲ ಜನರು ಆದಷ್ಟು ಬೇಗ ಚೇತರಿಸಿಕೊಂಡು ನವ ಜೀವನ ಆರಂಭಿಸುವಂತೆ ಕ್ಷೇತ್ರದ ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರು ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಲ್ಲಿ ಪ್ರಾರ್ಥಿಸಿರುತ್ತಾರೆ.

– ಹೊಂಬುಜ ಜೈನ ಮಠ